Saturday, May 11, 2013

ಹೊಸ ನಾಳೆಗೆ..

ಹೊಸ ನಾಳೆಗೆ, ನೀ ಕೊಟ್ಟ
ಮುತ್ತುಗಳ ರಂಗೋಲಿ ಇಟ್ಟಿದ್ದೇನೆ
ನೀ ಭಿತ್ತಿದ ಭಾವಗಳ ರಂಗು ತುಂಬಿದ್ದೇನೆ
ನಿನ್ನದೇ ಸವಿನೆನಪ ತೋರಣ ಕಟ್ಟಿದ್ದೇನೆ
ನಿನ್ನ ವಿರಹವನೆ ದೀಪ ಮಾಡಿ
ಆರತಿ ಹಚ್ಚಿದ್ದೇನೆ..

ಹೊಸ ನಾಳೆಗೆ, ನನ್ನದೆನ್ನುವುದೆಲ್ಲವ
ಬೇವು ಬೆಲ್ಲವ ನಿನಗೇ ಕೊಟ್ಟಿದ್ದೇನೆ
ನನ್ನೆಲ್ಲ ನಲಿವುಗಳ ನಿನ್ನೊಂದು
ನಗುವಿಗೇ ಒತ್ತೆಯಿಟ್ಟಿದ್ದೇನೆ
ಬೇರಾದ ದಾರಿಗಳ ಹೊರತಾಗಿಯೂ
ಭಾವತೀರದಿ ನಿನ್ನ ಜೊತೆ ಹೆಜ್ಜೆಯಿಟ್ಟಿದ್ದೇನೆ..

ನಾಳೆಯ ಹೊಗಳಿಗೆ ನೀ
ಗಂಧವಾಗಲೆಂದು
ನನ್ನೆಲ್ಲ ಸ್ವಾರ್ಥಿ ಕನಸುಗಳ
ನನ್ನೊಳಗೇ ಬಂಧಿಸಿಟ್ಟಿದ್ದೇನೆ
ಹುಟ್ಟುವ ಹೊಸ ರವಿಗೆ ನಿನ್ನೊಲವ
ಬೆಳಕಿರಲಿ ಎಂದು ಹಾರೈಸಿ
ಜನುಮಗಳ ಹರಕೆ ಕಟ್ಟಿದ್ದೇನೆ..

ಹೊಸ ನಾಳೆಗೆ,
ನನ್ನೆಲ್ಲ ನೋವು ನಲಿವುಗಳ
ಜೀವ-ಸಾವುಗಳ, ಭಾವ-ಬದುಕುಗಳ
ನಾವೆಯಲಿ
ನಿನ್ನೊಲವ ನೀರ ಮೇಲೆ
ನಿನ್ನನ್ನೇ ತೇಲಿ ಬಿಟ್ಟಿದ್ದೇನೆ...

4 comments:

  1. ನಮೃತಾ....
    ನಾ ಇಷ್ಟು ಕಾಲ ಓದಲೇ ಇಲ್ಲ ನಿನ್ನ ಕವನಗಳ...

    ಹೊಸ ನಾಳೆಗೆ, ನೀ ಕೊಟ್ಟ
    ಮುತ್ತುಗಳ ರಂಗೋಲಿ ಇಟ್ಟಿದ್ದೇನೆ
    ನೀ ಭಿತ್ತಿದ ಭಾವಗಳ ರಂಗು ತುಂಬಿದ್ದೇನೆ
    ನಿನ್ನದೇ ಸವಿನೆನಪ ತೋರಣ ಕಟ್ಟಿದ್ದೇನೆ
    ನಿನ್ನ ವಿರಹವನೆ ದೀಪ ಮಾಡಿ
    ಆರತಿ ಹಚ್ಚಿದ್ದೇನೆ..

    ಎಂತಹ ಚಂದದ ಸಾಲುಗಳು...
    ಅದ್ಭುತ ಭಾವ... ತುಂಬಾ ಇಷ್ಟವಾಯ್ತು......


    ReplyDelete
    Replies
    1. ಧನ್ಯವಾದಗಳು ರಾಘಣ್ಣ..ಃ)

      ನನ್ನ ಭಾವಗಳು ಇನ್ನೂ ಪಕ್ವಗೊಳ್ಳಲು ನಿಮ್ಮ ಸಲಹೆಗಳು ಅತೀ ಅಗತ್ಯ...

      Delete
    2. ಅದು ಯಾವತ್ತೂ ಇದೆ.....

      ಪಯಣ ಸಾಗಲಿ.....

      ಇಲ್ಲಿ ಜೊತೆಯಾಗಿ ನಡೆವವರು ತುಂಬಾ ಜನ.....

      Delete
  2. This comment has been removed by the author.

    ReplyDelete